Aug 9, 2016: 7th August, 2016 is a significant day in the history of Mandd Sobhann as the ‘Unity in Diversity Wall’ depicting various Konkani communities, has been erected at Kalaangann, on this day.

20 artisans deputed by the Shilpakala Academy created the 15 life-size cement statues installed on the ‘Unity in Diversity Wall’, during the 14-days (July 25 to Aug. 7) ‘Cement Shilpakala Camp’ organised by Mandd Sobhann in association with the Karnataka Shilpakala Academy.

 

 

 

Shri Roy Castelino, President of Karnataka Konkani Sahitya Academy, unveiled the stone which had the names of the artisans engraved on it and Shri Mahadevappa Shambhulingappa Shilpi, President of the Karnataka Shilpakala Academy, inaugurated the Unity in Diversity Wall by cutting the ribbon. 

Camp Director, Shri Gowrishankar B. G., spoke on behalf of the artisans. He said that the Shilpakala Camp at Kalaangann was a unique experience.  He applauded Mandd Sobhann for the love and respect they showered on the artistes.

 

 

Shri Mahadevappa Shambhulingappa Shilpi, President of Karnataka Shilpakala Academy, speaking on the occasion, said that the 15 statues are a reciprocation of the artisans’ love towards Mandd Sobhann. He said that the environment at Kalaangann also helped the artisans in artistically creating the statues.

Smt. Indramma H. V., the Registrar of the Karnataka Shilpakala Academy, said that this was the first Shilpakala Camp held in the Dakshina Kannada District. She congratulated the artistes for their outstanding work and said that it is their work that gives prestige to the Karnataka Shilpakala Academy.

 

 

Shri Roy Castelino, the President of the Karnataka Konkani Sahitya Academy, said that the work of the Shilpakala Academy is everlasting and through each camp it organises, the Academy leaves behind its footprint through the work undertaken there.

Mandd Sobhann presented the artisans with a memento and they also received certificates from the Shilpakala Academy. Mandd Sobhann also honoured all those who provided assistance during the Camp. Shri Louis J. Pinto, President of Mandd Sobhann, Shri B. Devdas Pai, Registrar of Karnataka Konkani Sahitya Academy and Shri Lawrence D’Souza, Camp Co-ordinator, were also present on the dais.

 

 

A Siddi troupe from Mainalli (Yellapur) performed on the occasion and they were backed by members of the Sumell Singing Club.

Shri Eric Ozario, Gurkar of Mandd Sobhann proposed the Vote of Thanks. Shri Victor Mathias compered the programme.

 

 ಕಲಾಂಗಣದಲ್ಲಿ ‘ವಿವಿಧತೆಂತ್ ಏಕತಾ’ ಗೋಡೆ ನಿರ್ಮಾಣ
--------------

ಅಗಸ್ಟ್ 7, 2016 ಮಾಂಡ್ ಸೊಭಾಣ್‍ನ ಇತಿಹಾಸದಲ್ಲಿ ಒಂದು ಮಹತ್ವದ ದಿನ. ಈ ದಿನದಂದು, ವಿವಿಧ ಕೊಂಕಣಿ ಸಮುದಾಯಗಳನ್ನು ಪ್ರತಿಬಿಂಬಿಸುವ ‘ವಿವಿಧತೆಂತ್ ಏಕತಾ’ (ವೈವಿಧ್ಯತೆಯಲ್ಲಿ ಐಕ್ಯತೆ) ಗೋಡೆ ಕಲಾಂಗಣದಲ್ಲಿ ಸ್ಥಾಪಿಸಲಾಗಿದೆ.

ಈ ಗೋಡೆಯಲ್ಲಿ ಪ್ರತಿಷ್ಠಾಪಿಸಿರುವ 15 ಜೀವ-ಗಾತ್ರದ (ಟiಜಿe-size) ಸಿಮೆಂಟ್ ಶಿಲ್ಪಗಳನ್ನು, ಮಾಂಡ್ ಸೊಭಾಣ್ ಸಂಸ್ಥೆಯು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಇವರ ಸಹಯೋಗದಿಂದ ಕಲಾಂಗಣದಲ್ಲಿ ಆಯೋಜಿಸಿದ 14 ದಿನಗಳ ‘ಶಿಲ್ಪಕಲಾ ಶಿಬಿರದಲ್ಲಿ’, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಕಳುಹಿಸಿದ 20 ಶಿಲ್ಪಿಗಳು ರಚಿಸಿದ್ದಾರೆ.

 

 

ಶ್ರೀ ರೊಯ್ ಕ್ಯಾಸ್ತೆಲಿನೊ, ಅಧ್ಯಕ್ಷರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಶಿಲ್ಪಿಗಳ ಹೆಸರಿರುವ ಫಲಕವನ್ನು ಅನಾವರಣಗೊಳಿಸಿದರು ಹಾಗೂ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ, ಅಧ್ಯಕ್ಷರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಇವರು ‘ವಿವಿಧತೆಂತ್ ಏಕತಾ’ ಗೋಡೆಯನ್ನು ಉದ್ಘಾಟಿಸಿದರು.

ಶಿಲ್ಪಿಗಳ ಪರವಾಗಿ ಮಾತನಾಡಿದ ಶಿಬಿರ ನಿರ್ದೇಶಕ ಶ್ರೀ ಗೌರಿಶಂಕರ ಬಿ. ಜಿ. ಇವರು ಕಲಾಂಗಣದಲ್ಲಿ ನಡೆದ ಶಿಬಿರ ಒಂದು ಅನನ್ಯಾ ಅನುಭವ ಎಂದು ಹೇಳಿದರು. ಕಲಾವಿದರಿಗೆ ನೀಡುವ ಪ್ರೀತಿ ಹಾಗೂ ತೋರುವ ಗೌರವಕ್ಕಾಗಿ ಮಾಂಡ್ ಸೊಭಾಣ್‍ನನ್ನು ಅವರು ಶ್ಲಾಘಿಸಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾದ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಇವರು ಶಿಲ್ಪಿಗಳು ರಚಿಸಿರುವ 15 ಶಿಲ್ಪಗಳು ಮಾಂಡ್ ಸೊಭಾಣ್ ಅವರಿಗೆ ನೀಡಿದ ಪ್ರೀತಿಯ ಪ್ರತಿಬಿಂಬ ಎಂದರು. ಕಲಾಂಗಣದ ಪರಿಸರ ಶಿಲ್ಪಿಗಳಿಗೆ ಸ್ಪೂರ್ತಿಯಾಗಿತ್ತೆಂದು ಅವರು ಹೇಳಿದರು.

 

 

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಶ್ರೀಮತಿ ಇಂದ್ರಮ್ಮ ಹೆಚ್. ವಿ. ಇವರು ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೊದಲ ಶಿಲ್ಪಕಲಾ ಶಿಬಿರ ಎಂದು ಹೇಳಿದರು. ಶಿಲ್ಪಿಗಳು ಮಾಡಿರುವ ಅತ್ಯುತ್ತಮ ಕೆಲಸಕ್ಕಾಗಿ ಅವರನ್ನು ಅಭಿನಂದಿಸಿದರು ಮತ್ತು ಇಂತಹ ಕೆಲಸಗಳಿಂದಾಗಿಯೇ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರತಿಷ್ಠೆ ಹೆಚ್ಚುತ್ತದೆ ಎಂದು ಅವರು ಹೇಳಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಕೆಲಸ ಶಾಶ್ವತ ಹಾಗೂ ಅವರು ನಡೆಸುವ ಪ್ರತಿಯೊಂದು ಶಿಬಿರದ ಮುಖಾಂತರ ಆ ಪ್ರದೇಶಗಳಲ್ಲಿ ಅಕಾಡೆಮಿಯ ಛಾಪನ್ನು ಮೂಡಿಸುತ್ತಾರೆಂದು ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊರವರು ಹೇಳಿದರು.

 

 

ಮಾಂಡ್ ಸೊಭಾಣ್ ಎಲ್ಲಾ ಶಿಲ್ಪಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು ಹಾಗೂ ಶಿಲ್ಪಕಲಾ ಅಕಾಡೆಮಿ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಶಿಬಿರದಲ್ಲಿ ನೆರವು ನೀಡಿದ ಎಲ್ಲರಿಗೂ ಸನ್ಮಾನಿಸಲಾಯಿತು. ಮಾಂಡ್ ಸೊಭಾಣ್ ಅಧ್ಯಕ್ಷ, ಶ್ರೀ ಲುವಿ ಜೆ. ಪಿಂಟೊ, ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್, ಶ್ರೀ ಬಿ. ದೇವದಾಸ್ ಪೈ ಹಾಗೂ ಶ್ರೀ ಲೊರೆನ್ಸ್ ಡಿಸೋಜ, ಶಿಬಿರ ಸಂಚಾಲಕರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯೆಲ್ಲಾಪುರದ ಮೈನಳ್ಳಿಯಿಂದ ಬಂದ ಸಿದ್ದಿ ತಂಡ ಈ ಸಂದರ್ಭದಲ್ಲಿ, ಸುಮೇಳ್ ಗಾಯನ ಮಂಡಳಿಯೊಂದಿಗೆ ಪ್ರದರ್ಶನ ನೀಡಿತು.

ಮಾಂಡ್ ಸೊಭಾಣ್ ಗುರಿಕಾರರಾದ ಶ್ರೀ ಎರಿಕ್ ಒಝೇರಿಯೊ ವಂದಿಸಿದರು. ಶ್ರೀ ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.

 

 ಕಲಾಂಗಣಾಂತ್ ‘ವಿವಿಧತೆಂತ್ ಏಕತಾ’ ಪಾಗೊರ್ ಉದ್ಘಾಟನ್
--------------

ಆಗೊಸ್ತ್ 7, 2016 ಮಾಂಡ್ ಸೊಭಾಣಾಚ್ಯಾ ಇತಿಹಾಸಾಂತ್ ಏಕ್ ಮಹತ್ವಾಚೊ ದೀಸ್. ಹ್ಯಾ ದಿಸಾ, ವೆಗ್‍ವೆಗ್ಳ್ಯಾ ಕೊಂಕ್ಣಿ ಸಮುದಾಯಾಂಕ್ ಪಿಂತ್ರಾಂವ್ಚೊ ‘ವಿವಿಧತೆಂತ್ ಏಕತಾ’ ಪಾಗೊರ್ ಕಲಾಂಗಣಾಂತ್ ಉಬೊ ಕೆಲಾ.

ಹ್ಯಾ ಪಾಗೊರಾಚೆರ್ ಪ್ರತಿಷ್ಟಾಪಿತ್ ಕೆಲ್ಲ್ಯೊ 15 ಜೀವ್-ಗಾತ್ರಾಚೆ (ಟiಜಿe-size) ಸಿಮೆಂಟ್ ಮುರ್ತ್ಯೊ, ಶಿಲ್ಪಕಲಾ ಅಕಾಡೆಮಿನ್ ಧಾಡುನ್ ದಿಲ್ಲ್ಯಾ 20 ಶಿಲ್ಪಿಂನಿ, ಮಾಂಡ್ ಸೊಭಾಣಾನ್ ಕರ್ನಾಟಕ ಶಿಲ್ಪಕಲಾ ಅಕಾಡೆಮಿಚ್ಯಾ ಸಹಯೊಗಾನ್ ಮಾಂಡುನ್ ಹಾಡ್‍ಲ್ಲ್ಯಾ 14 ದಿಸಾಂಚ್ಯಾ ‘ಶಿಲ್ಪಕಲಾ ಶಿಬಿರಾಂತ್’ ತಯಾರ್ ಕೆಲ್ಯಾತ್.

 

 

ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷ್ ಶ್ರೀ ರೊಯ್ ಕ್ಯಾಸ್ತೆಲಿನೊ ಹಾಣೆಂ ಶಿಲ್ಪಿಂಚೆಂ ನಾಂವ್ ಆಸ್ಚೆಂ ಫಲಕ್ ಅನಾವರಣ್ ಕೆಲೆಂ ಆನಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ್ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ, ಹಾಣೆಂ ‘ವಿವಿಧತೆಂತ್ ಏಕತಾ’ ಪಾಗೊರ್ ಹಾಚೆಂ ಉದ್ಘಾಟನ್ ಕೆಲೆಂ.

ಸರ್ವ್ ಶಿಲ್ಪಿಂಚ್ಯಾ ಬಾಬ್ತಿಂ ಶಿಬಿರ್ ನಿರ್ದೇಶಕ್ ಶ್ರೀ ಗೌರಿಶಂಕರ ಬಿ.ಜಿ. ಉಲಯ್ಲೊ. ಕಲಾಂಗಣಾಂತ್ಲ್ಯಾ ಶಿಬಿರಾಂತ್ ತಾಂಕಾಂ ಏಕ್ ವಿಶೇಸ್ ಅನ್ಭೋಗ್ ಜಾಲೊ ಮ್ಹಣುನ್ ತೊ ಮ್ಹಣಾಲೊ. ಮಾಂಡ್ ಸೊಭಾಣಾನ್ ಕಲಾಕಾರಾಂಕ್ ದಿಂವ್ಚ್ಯಾ ಮೊಗಾ ಆನಿ ಮಾನಾವಿಶಿಂ ತಾಣೆಂ ಹೊಗ್ಳಿಕ್ ಉಚಾರ್ಲಿ.

ಮಾಂಡ್ ಸೊಭಾಣಾನ್ ಶಿಲ್ಪಿಂಚೆರ್ ವೊತ್‍ಲ್ಲ್ಯಾ ಮೊಗಾಚೆಂ ಪ್ರತಿರೂಪ್ ತ್ಯಾ 15 ಮುರ್ತೆಂನಿ ದಿಸುನ್ ಯೆತಾ ಮ್ಹಣುನ್ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ್, ಶ್ರೀ ಮಹದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಮ್ಹಣಾಲೊ. ಕಲಾಂಗಣಾಚೆಂ ವಾತಾವರಣ್ ಶಿಲ್ಪಿಂಕ್ ಸ್ಪೂರ್ತಿ ದೀಂವ್ಕ್ ಸಕ್ಲಾಂ ಮ್ಹಣುನ್ ತಾಣೆಂ ಸಾಂಗ್ಲೆಂ.

 

 

ಕರ್ನಾಟಕ ಶಿಲ್ಪಕಲಾ ಅಕಾಡೆಮಿಚಿ ರಿಜಿಸ್ಟ್ರಾರ್ ಶ್ರೀಮತಿ ಇಂದ್ರಮ್ಮ ಹೆಚ್. ವಿ. ಹೆಂ ದಕ್ಷಿಣ ಕನ್ನಡ ಜಿಲ್ಲ್ಯಾಂತ್ ಜಾಂವ್ಚೆಂ ಪಯ್ಲೆಂ ಶಿಬಿರ್ ಮ್ಹಣಾಲಿ. ಶಿಲ್ಪಿಂನಿ ಕೆಲ್ಲ್ಯಾ ಉತ್ತಿಮ್ ಕಾಮಾ ಖಾತಿರ್ ತಿಣೆಂ ತಾಂಕಾಂ ಶಾಭಾಸ್ಕಿ ಪಾಟಯ್ಲಿ ಆನಿ ಅಸಲ್ಯಾ ತಾಂಚ್ಯಾ ಉತ್ತೀಮ್ ಕಾಮಾ ವರ್ವಿಂಚ್ ಕರ್ನಾಟಕ ಶಿಲ್ಪಕಲಾ ಅಕಾಡೆಮಿಚೆಂ ನಾಂವ್ ಗಾಜ್ತಾ ಮ್ಹಣುನ್ ತಿ ಮ್ಹಣಾಲಿ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಚೆಂ ಕಾಮ್ ಶಾಶ್ವಿತ್ ಉರ್ಚೆಂ ತಸಲೆಂ ಆನಿ ಶಿಲ್ಪಕಲಾ ಅಕಾಡೆಮಿನ್ ಆಸಾ ಕರ್ಚ್ಯಾ ಶಿಬಿರಾಂವರ್ವಿಂ ತ್ಯಾ-ತ್ಯಾ ಗಾಂವಾಂನಿ ಅಕಾಡೆಮಿ ಆಪೆÇ್ಲ ಛಾಪ್ ಸೊಡ್ತಾ ಮ್ಹಣುನ್ ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷ್ ಶ್ರೀ ರೊಯ್ ಕ್ಯಾಸ್ತೆಲಿನೊ ಮ್ಹಣಾಲೊ.

 

 

ಮಾಂಡ್ ಸೊಭಾಣಾ ತರ್ಫೆನ್ ಸರ್ವ್ ಶಿಲ್ಪಿಂಕ್ ಉಗ್ಡಾಸಾಚಿ ಕಾಣಿಕ್ ಆನಿ ಶಿಲ್ಪಕಲಾ ಅಕಾಡೆಮಿ ಥಾವ್ನ್ ಪ್ರಮಾಣ್ ಪತ್ರಾಂ ದೀವ್ನ್ ಮಾನ್ ಕೆಲೊ. ಶಿಬಿರಾಂತ್ ಆಧಾರ್ ದಿಲ್ಲ್ಯಾ ಸರ್ವಾಂಕ್‍ಯೀ ಮಾನ್ ಕೆಲೊ. ಮಾಂಡ್ ಸೊಭಾಣ್ ಅಧ್ಯಕ್ಷ್, ಶ್ರೀ ಲುವಿ ಜೆ. ಪಿಂಟೊ, ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್, ಶ್ರೀ ಬಿ. ದೇವದಾಸ್ ಪೈ ಆನಿ ಶಿಬಿರ್ ಸಂಚಾಲಕ್, ಶ್ರೀ ಲೊರೆನ್ಸ್ ಡಿಸೋಜ, ವೇದಿರ್ ಹಾಜರ್ ಆಸ್‍ಲ್ಲೆ.

ಯೆಲ್ಲಾಪುರ್ಚ್ಯಾ ಮೈನಳ್ಳಿ ಥಾವ್ನ್ ಆಯಿಲ್ಲ್ಯಾ ಸಿದ್ದಿ ಪಂಗ್ಡಾನ್, ಸುಮೇಳ್ ಗಾಯಾನ್ ಮಂಡಳೆಚ್ಯಾ ಸಾಂಗಾತಾನ್, ಪ್ರದರ್ಶನ್ ದಿಲೆಂ.

ಮಾಂಡ್ ಸೊಭಾಣ್ ಗುರ್ಕಾರ್ ಶ್ರೀ ಎರಿಕ್ ಒಝೇರಿಯೊ ಹಾಣೆಂ ಉಪ್ಕಾರ್ ಆಟಯ್ಲೊ ಆನಿ ಶ್ರೀ ವಿಕ್ಟರ್ ಮಥಾಯಸ್ ಹಾಣೆಂ ಕಾರ್ಯೆಂ ಚಲೊವ್ನ್ ವೆಲೆಂ.

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626