Print

 

ವರದಿ : ವಿತೊರಿ ಕಾರ್ಕಳ
ಚಿತ್ರ : ವಿಕಾಸ್, ಕಲಾಕುಲ್

"ಇಂದಿಲ್ಲಿ ಅಂತರಾಷ್ರ್ಟೀಯ ಮಟ್ಟದ ಕಾರ್ಯಕ್ರಮ ನೋಡಿದ ಅನುಭವವಾಗುತ್ತಿದೆ. ಇದೇ ತಂಡ ಗೋವಾಕ್ಕೆ ಬಂದು ಈ ಸಂಗೀತವನ್ನು ನಮ್ಮ ಯುವಜನತೆಗೆ ಪರಿಚಯಿಸಲು ಆಹ್ವಾನ ನೀಡುತ್ತಿದ್ದೇನೆ. ಈ ನಿರಂತರತೆ ಕಾಪಾಡಲು ಮಾಂಡ್ ಸೊಭಾಣ್ ಮಾಡಿದ ತ್ಯಾಗದ ಅರಿವಿದೆ.


ಕೊಂಕಣಿ ಪ್ರದರ್ಶನ ಕಲೆಗೆ ಮಾಂಡ್ ಸೊಭಾಣ್ ಸಂಸ್ಥೆ ನೀಡಿದ ಮಹತ್ವದ ಯೋಗದಾನಕ್ಕಾಗಿ ಅಭಿನಂದಿಸುತ್ತೇನೆ."


ಎಂದು ಗೋವಾ ವಿಧಾನಸಭೆಯ ಉಪ ಸಭಾಪತಿ ಮೈಕಲ್ ಲೋಬೊ ಸಂತಸ ವ್ಯಕ್ತಪಡಿಸಿದರು. ಅವರು ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ವತಿಯಿಂದ ನಗರದ ಕಲಾಂಗಣದಲ್ಲಿ ಆಗಸ್ಟ್ 05 ರಂದು ಆಯೋಜಿಸಿದ 200ನೇ ತಿಂಗಳ ವೇದಿಕೆ ಕಾರ್ಯಕ್ರಮ ಅಪುಟ್ ಇದರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

 

 

 


ಈ ಸಂದರ್ಭದಲ್ಲಿ ಕಲಾವಿದ ವಿಲ್ಸನ್ ಕಯ್ಯಾರ್ ರಚಿಸಿದ ಮಾಂಡ್ ಸೊಭಾಣ್ ಸಂಘಟನೆಯ ಆರಂಭಿಕ ಸದಸ್ಯರಲ್ಲಿ ಓರ್ವರಾದ ಲೊರೆನ್ಸ್ ಪಿಂಟೊ ಇವರ ಭಾವಚಿತ್ರ ಅನಾವರಣಗೊಳಿಸಿದರು. ಹಾಗೂ ವಿತೊರಿ ಕಾರ್ಕಳ ಬರೆದ, ಕಳೆದ 16 ವರ್ಷ 8 ತಿಂಗಳಲ್ಲಿ ನಡೆದ 200 ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ `ಶೆಕ್ಡ್ಯಾ ವಯ್ರ್ ಶೆಕ್ಡೊ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ಪೋಷಕರಾದ ಫ್ರೆಂಡ್ಸ್ ಆಫ್ ಲೊರಿ ಗೆಳೆಯರನ್ನು, ಕಲಾವಿದರನ್ನು ಗೌರವಿಸಲಾಯಿತು.


ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲೂವಿಸ್ ಜೆ ಪಿಂಟೊ, ಗುರಿಕಾರ ಎರಿಕ್ ಒಝೇರಿಯೊ, ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ಲೊಯ್ ನೊರೊನ್ಹಾ ಹಾಗೂ ದಿ. ಲೊರೆನ್ಸ್ ಇವರ ಪತ್ನಿ ಲೀನಾ ಪಿಂಟೊ ಉಪಸ್ಥಿತರಿದ್ದರು. ಜೊಯ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳ ಪರಿಚಯ ನೀಡಿದರು.


ಕಿಕ್ಕಿರಿದ ಸಭಾಂಗಣದಲ್ಲಿ ನೆರೆದ ಪ್ರೇಕ್ಷಕರು ಅಪುಟ್ (ಶುದ್ಧ) ಮಾಂಡ್ ಸೊಭಾಣ್ ಸಂಗೀತವನ್ನು ತನ್ಮಯರಾಗಿ ಆಲಿಸಿದರು.


ಮಾಂಡ್ ಸೊಭಾಣ್, ಸುಡ್ಸುಡೆ ರೆಂವೆಚೆರ್, ಅಮೊರ್ ಪಿಕ್ಯಾ, ಆಜ್ ಹಾಂವ್ ವೆತಾಂ, ಡಾರಾಂವ್ ಡಾರಾಂವ್, ಅಂಜು, ಉಜ್ಯಾ ವೆಂಗೆಂತ್, ಹಾಂವ್ ವೆತಾಂ, ಫಾತೊಡೆಚ್ಯಾ ಕೊಂಬ್ಯಾನ್, ಸೂರ್ಯ್ ಗೆಲಾ ಪಲ್ತಡಿ, ಬಿಂರ್ಡಾಂ, ರಾತ್ ದೀಸ್, ಚಿಂತಾ ಸದಾಂ, ಮ್ಹಾಕಾ ಕಳನಾ, ಮ್ಹಜೊ ಮೊಗಾಳ್ ಗಾಂವ್ ಮತ್ತು ಮಾಂಡ್ ಸೊಭಾಣ್ ಹಿ ಗೀತೆಗಳಿಗೆ ಎರಿಕ್ ಒಝೆರಿಯೊ, ಜೋಯ್ಸ್ ಒಝೇರಿಯೊ, ಪ್ರಕಾಶ್ ಡಿಸೋಜ, ಝೀನಾ ಪಿರೇರಾ, ಪ್ರಜೋತ್ ಡೆಸಾ, ರೊಬಿನ್ ಸಿಕ್ವೇರಾ, ಡಿಯಾಲ್ ಡಿಸೋಜ, ಅಮನ್, ಜಿಯಾ, ನಿಹಾಲ್ ತಾವ್ರೊ, ಆಲ್ವಿನ್ ಫೆರ್ನಾಂಡಿಸ್, ಆಡೊಲ್ಫ್ ಜಯತಿಲಕ್, ಶಿಲ್ಪಾ ಕುಟಿನ್ಹಾ, ಜೇಸನ್ ಲೋಬೊ, ಸೋನಲ್ ಮೊಂತೇರೊ, ಕ್ಯಾಜಿಟನ್ ಡಾಯಸ್, ಬುಟ್ಟೊ, ಜ್ಯಾಕ್ಲಿನ್ ಫೆರ್ನಾಂಡಿಸ್ ಮುಂತಾದ ಪ್ರಖ್ಯಾತ ಕಲಾವಿದರು ದನಿಯಾದರು.


ಕರ್ನಾಟಕ, ಗೋವಾ, ಮುಂಬಯಿ ಪ್ರದೇಶಗಳ ಕೊಂಕಣಿಯ ಹೆಸರಾಂತ ಕವಿಗಳಾದ ಚಾಫ್ರಾ ಡಿಕೋಸ್ತಾ, ಮೆಲ್ವಿನ್ ರೊಡ್ರಿಗಸ್, ಯೂಸುಫ್ ಶೇಖ್, ಅರುಣಾ ವಿ ಕಾಮತ್, ಫ್ರೆಡ್ ಕುಮಾರ್, ಶ್ರೀಧರ್ ಕಾಮತ್, ಉದಯ್ ಭೆಂಭ್ರೆ, ಜೊಸ್ಸಿ ಪಿಂಟೊ, ಲೋಯ್ಡ್ ರೇಗೊ ಮುಂತಾದವರ ಕವಿತೆಗಳನ್ನು ಆಯ್ಕೆ ಮಾಡಿ ಎರಿಕ್ ಒಝೇರಿಯೊ ಸಂಗೀತ ಸಂಯೋಜಿಸಿದ್ದರು.


ಬುಟ್ಟೊ-ಕೊಳಲು, ಮನೋಜ್ ಜೊರ್ಜ್-ವಯೊಲಿನ್, ಕ್ಯಾಜಿಟನ್ ಡಾಯಸ್-ಕೀಬೋರ್ಡ್, ಆಲ್ವಿನ್ ಫೆರ್ನಾಂಡಿಸ್-ಗಿಟಾರ್, ದೀಪಕ್ರಾಜ್ ಉಲ್ಲಾಳ್-ತಬ್ಲಾ, ಜೆರೊಮ್ ಕುವೆಲ್ಲೊ-ಬಾಝ್, ಸಚಿನ್ ಸಿಕ್ವೇರಾ-ತಾಳವಾದ್ಯ ಹಾಗೂ ಇಶಾನ್ ಫೆರ್ನಾಂಡಿಸ್-ಗಿಟಾರ್'ನಲ್ಲಿ ಸಂಗೀತ ನೀಡಿ ಸಹಕರಿಸಿದರು.


ಸಂಗೀತ ಕಾರ್ಯಕ್ರಮದ ಸೂತ್ರ ಸಂಚಾಲನೆಯನ್ನು ಟೈಟಸ್ ನೊರೊನ್ಹಾ ನಿರ್ವಹಿಸಿದರೆ, ಸಭಾ ಕಾರ್ಯಕ್ರಮವನ್ನು ಅರುಣ್ ರಾಜ್ ರೊಡ್ರಿಗಸ್ ನಿರ್ವಹಿಸಿದರು.