ಮಾಂಡ್ ಸೊಭಾಣ್ ತನ್ನ ಗಾಯನ ಮಂಡಳಿ ಸುಮೇಳ್ ವತಿಯಿಂದ 06-10-19 ರಂದು ಸಂಜೆ 6.30 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ಅಂತರಾಷ್ಟ್ರೀಯ ಸಂಗೀತ ದಿವಸ ಆಚರಿಸಲಿದೆ.

ಅಂದು ಉಡುಪಿ ಮಲ್ಪೆಯ ರೊನಾಲ್ಡ್ ಡಿಸಿಲ್ವಾ ಮತ್ತು ಡೊನಾಲ್ಡ್ ಡಿಸಿಲ್ವಾ ಅವಳಿ ಸೋದರರನ್ನು ಸನ್ಮಾನಿಸಲಾಗುವುದು. ಕಳೆದ 50 ವರ್ಷಗಳಿಂದ, ಎಲ್ಲಾ ರೀತಿಯ ಸಂಗೀತ ಉಪಕರಣಗಳ ರಿಪೇರಿಯಲ್ಲಿ ರಾಜ್ಯಾದ್ಯಾಂತ ಹೆಸರುವಾಸಿಯಾದ ಅವರುಗಳು ಈ ಕ್ಷೇತ್ರದಲ್ಲಿ ಪಾರಮ್ಯ ಮೆರೆದಿದ್ದಾರೆ. ಡೊನಾಲ್ಡ್ ಡಿಸಿಲ್ವಾ ಬ್ರಾಸ್ ಬ್ಯಾಂಡ್ ಸಂಬಂಧಿ ವಾದ್ಯಗಳ ಹಾಗೂ ರೊನಾಲ್ಡ್ ಡಿಸಿಲ್ವಾ ತಂತಿ ಇರುವ ವಾದ್ಯಗಳ ರಿಪೇರಿಯಲ್ಲಿ ಎತ್ತಿದ ಕೈ. ಇದಲ್ಲದೆ ಇವರು ಬ್ಲೂ ರಿಬ್ಬನ್ ಬ್ಯಾಂಡ್ ತಂಡವನ್ನು ಮುನ್ನಡೆಸಿದ್ದಾರೆ.

ನಂತರ ಸುಮೇಳ್ ತಂಡದ ನೇತೃತ್ವದಲ್ಲಿ 214 ತಿಂಗಳ ವೇದಿಕೆ ಸರಣಿ ಕಾರ್ಯಕ್ರಮದಲ್ಲಿ `ಸಂಗೀತ ಸಂಸಾರ್’ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಪ್ರಕಟನೆ ತಿಳಿಸಿದೆ.


ಸಂಗೀತ್ ಶೆತಾಂತ್ಲ್ಯಾ ವಿಭಿನ್ನ್ ಸಾಧಕಾಂಕ್ ಮಾನ್

ಮಾಂಡ್ ಸೊಭಾಣ್ ಆಪ್ಲಿ ಗಾಯಾನ್ ಮಂಡಳಿ ಸುಮೇಳ್ ಪಂಗ್ಡಾ ಥಾವ್ನ್ 06-10-19 ವೆರ್ ಸಾಂಜೆರ್ 6.30 ವೊರಾಂ ಥಾವ್ನ್ ಕಲಾಂಗಣಾಂತ್ ಅಂತರಾಷ್ಟ್ರೀಯ್ ಸಂಗೀತ್ ದಿವಸ್ ಮನಾಯ್ತಾ.
ಉಡುಪಿ ಮಲ್ಪೆಚ್ಯಾ ರೊನಾಲ್ಡ್ ಡಿಸಿಲ್ವಾ ಆನಿ ಡೊನಾಲ್ಡ್ ಡಿಸಿಲ್ವಾ ಜೊವ್ಳ್ಯಾ ಭಾವಾಂಕ್ ಹ್ಯಾ ಕಾರ್ಯಾಂತ್ ಮಾನ್ ಕರ್ತಲೆ. ಪಾಟ್ಲ್ಯಾ 50 ವರ್ಸಾಂ ಥಾವ್ನ್, ಸರ್ವ್ ಸಂಗೀತ್ ಉಪಕರಣಾಂ ರಿಪೇರಿ ಕರ್ಚ್ಯಾಂತ್ ರಾಜ್ಯ್‍ಮಟ್ಟಾರ್ ತಾಂಚೊ ಉಕಲ್ಲಲೊ ಹಾತ್.

ಡೊನಾಲ್ಡ್ ಡಿಸಿಲ್ವಾ ಬ್ರಾಸ್ ಬ್ಯಾಂಡ್ ಸಂಬಂಧಿ ವ್ಹಾಜಾಂತ್ರಾಂ ರಿಪೇರಿ ಕರ್ತಾ ತರ್, ರೊನಾಲ್ಡ್ ಡಿಸಿಲ್ವಾ ತಾರ್ ಆಸ್ಚಿಂ ವ್ಹಾಜಾಂತ್ರಾಂ ರಿಪೇರಿ ಕರ್ತಾತ್. ಸಾಂಗಾತಾ ಬ್ಲೂ ರಿಬ್ಬನ್ ಬ್ಯಾಂಡಾಕ್‍ಯಿ ತಾಣಿಂ ಸಾಂಗಾತ್ ದಿಲಾ.

ಮಾಗಿರ್ ಸುಮೇಳ್ ಪಂಗ್ಡಾಚ್ಯಾ ಮುಕೆಲ್ಪಣಾರ್ 214 ವಿ ಮ್ಹಯ್ನ್ಯಾಳಿ ಮಾಂಚಿ ಕಾರ್ಯಾಂತ್, ತನ್ರ್ಯಾ, ಪನ್ರ್ಯಾ ಕಲಾಕಾರಾಂ ಥಾವ್ನ್ `ಸಂಗೀತ್ ಸಂಸಾರ್’ ಕಾರ್ಯೆಂ ಸಾದರ್ ಜಾತಲೆಂ.

ಪ್ರವೇಶ್ ಧರ್ಮಾರ್ಥ್ ಆಸ್ತಲೊ.