ಕೊಂಕಣಿಯ ಪ್ರಮುಖ ಸಾಂಸ್ಕøತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ಉದ್ದೇಶಿತ ಅಂತರಾಷ್ಟ್ರೀಯ ಮಟ್ಟದ `ಕೊಂಕಣಿ ಮ್ಯೂಝಿಯಮ್’ ಗಾಗಿ ಈ ಸಾಲಿನ ಆಯವ್ಯಯ ಪತ್ರದಲ್ಲಿ 2.5 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಕೊಂಕಣಿಯ ಬೆಳವಣಿಗೆಗಾಗಿ ಈ ಕೊಡುಗೆ ನೀಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಸಮಸ್ತ ಕೊಂಕಣಿ ಜನರ ಪರವಾಗಿ ಅಧ್ಯಕ್ಷರಾದ ಲುವಿಸ್ ಜೆ ಪಿಂಟೊ ಮತ್ತು ಗುರಿಕಾರ ಎರಿಕ್ ಒಝೇರಿಯೊ ಧನ್ಯವಾದ ಸಮರ್ಪಿಸಿದ್ದಾರೆ.

ಅದೇ ರೀತಿ ಈ ಕೊಡುಗೆ ನೀಡಲು ಸಹಕರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಮಂತ್ರಿ ಶ್ರೀಮತಿ ಉಮಾಶ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀ ರಮಾನಾಥ ರೈ, ಪುತ್ತೂರು ಶಾಸಕಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ಶ್ರೀ ಜೆ ಆರ್ ಲೋಬೊ, ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜ, ಭಟ್ಕಳದ ಶಾಸಕರಾದ ಶ್ರೀ ಮಾಂಕಾಳ ವೈದ್ಯ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಹಾಗೂ ಈ ಬಗ್ಗೆ ನಿರಂತರ ಶ್ರಮಿಸಿದ ಸಮಿತಿ ಸದಸ್ಯರಾದ ಶ್ರೀ ಲಾರೆನ್ಸ್ ಡಿಸೋಜ ಇವರಿಗೂ ಸಂಸ್ಥೆಯು ಧನ್ಯವಾದಗಳನ್ನು ಸಮರ್ಪಿಸಿದೆ.

 

 

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626