The International Music Interaction - between Marialena (Austria) on the piano, Amina (Hungary) flautist & the artistes of Sumell (Mandd Sobhann Singing Club) & the Baila Show troupe - organised by Mandd Sobhann on Wednesday, Feb 6, 2019, at 6, at Kalaangann - was a resounding success, with music enthusiasts gathering in houseful numbers and enjoying the 2-hour music experience.

The Interaction was conducted by Eric Ozario, with Jacqueline Fernandes introducing the guests.

The Interaction began with Amina playing some classics on flute, accompanied by Marialena. Then local talents took stage - starting with Kenny Pereira on Sax, backed by Warren D'costa on the guitar. They presented 3 popular melodies on jazz. Manish Das, a flute maestro then presentented 2 Hindustani ragas. Reuben Machado, a young musician presented Despacito, playing the harmonica and the guitar at the same time, after which he played the flute, playing the Bollywood song 'Mitwa'. Christopher Alvares from Canada added color to the evening by dancing to the jazz music.

Then the gathering learnt a Hungarian song taught by Amina and an Austrian song by Marialena. To conclude, the entire tathering sang a Manddo, which the guests also tried to learn.

All in all, the packed house enjoyed every bit of unique music.


ಕಲಾಂಗಣ : ಅಂತರಾಷ್ಟ್ರೀಯ ಸಂಗೀತ ವಿನಿಮಯ

ಫೆಬ್ರವರಿ 06, 2019 ರಂದು ಶಕ್ತಿನಗರದ ಕಲಾಂಗಣದಲ್ಲಿ ವಿಶಿಷ್ಟ ಸಂಗೀತ ವಿನಿಮಯ ಕಾರ್ಯಕ್ರಮ ನಡೆಯಿತು. ಆಸ್ಟ್ರಿಯಾದ ಪಿಯಾನೊ ಕಲಾವಿದೆ ಮರಿಯಾಲೆನಾ ಹಾಗೂ ಹಂಗೇರಿಯ ಕೊಳಲು ವಾದಕಿ ಅಮಿನಾ ಇವರು ಈ ಕಾರ್ಯಕ್ರಮ ನಡೆಸಿಕೊಟ್ಟರು. ಮಾಂಡ್ ಸೊಭಾಣ್‌ನ ಗಾಯನ ತಂಡ ಸುಮೇಳ್ ಹಾಗೂ ಬಾಯ್ಲಾ ತಂಡ ಇವರಿಗೆ ಜತೆಯಾದರು.

ಕೆನ್ನಿ ಪಿರೇರಾ (ಸ್ಯಾಕ್ಸೊಫೊನ್) ಮತ್ತು ವಾರನ್ ಡಿಕೋಸ್ತಾ (ಗಿಟಾರ್) ಇವರು ಜ್ಯಾಝ್ ಸಂಗೀತವನ್ನು, ಮನಿಶ್ ದಾಸ್ (ಕೊಳಲು) ಹಿಂದೂಸ್ತಾನಿ ರಾಗದಲ್ಲಿ ಎರಡು ಹಾಡುಗಳನ್ನು ಪ್ರಸ್ತುತಪಡಿಸಿದರು. ಭರವಸೆಯ ಯುವ ಸಂಗೀತಗಾರ ರೂಬನ್ ಮಚಾದೊ ಏಕಕಾಲದಲ್ಲಿ ಹಾರ್ಮೊನಿಕಾ ಮತ್ತು ಗಿಟಾರನ್ನು ಉಪಯೋಗಿಸಿ ಡೆಸ್ಪಾಚಿಯೊ ಹಾಡನ್ನೂ ಮತ್ತು ಕೊಳಲಿನಿಂದ ಮಿತ್ವಾ ಹಿಂದಿ ಹಾಡನ್ನೂ ಸಾದರಪಡಿಸಿದರು. ಕೆನಡಾದ ಕ್ರಿಸ್ಟೋಫರ್ ಆಲ್ವಾರಿಸ್ ಜ್ಯಾಝ್ ಸಂಗೀತಕ್ಕೆ ನರ್ತಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

ನೆರೆದ ಸಭಿಕರಿಗೆ ಒಂದು ಹಂಗೇರಿಯನ್ ಹಾಡು ಮತ್ತೊಂದು ಆಸ್ಟ್ರಿಯನ್ ಹಾಡು ಮತ್ತು ಕೊಂಕಣಿ ಮಾಂಡೊ ಹಾಡುವ ಅವಕಾಶ ಲಭಿಸಿತು.

ಮಾಂಡ್ ಸೊಭಾಣ್ ಆಯೋಜಿಸಿದ ಈ ಕಾರ್ಯಕ್ರಮವನ್ನು ಎರಿಕ್ ಒಝೇರಿಯೊ ನಿರ್ವಹಿಸಿದರು. ಜ್ಯಾಕ್ಲಿನ್ ಫೆರ್ನಾಂಡಿಸ್ ಅತಿಥಿಗಳ ಪರಿಚಯ ಮಾಡಿದರು.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626