Nov 12, 2016: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಯುವ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಆಲ್ವಾರಿಸ್ ಇವರನ್ನು ನೇಮಕ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಆದೇಶ ನೀಡಿದ್ದಾರೆ.

Joachim Stany Alvares

ನಗರದ ಬೊಂದೇಲ್ ವಾಸಿಯಾದ ಸ್ಟ್ಯಾನಿ ಆಲ್ವಾರಿಸ್ ಕಾಂಗ್ರೆಸ್‍ನ ನಿಷ್ಟಾವಂತ ಕಾರ್ಯಕರ್ತರಲ್ಲಿ ಓರ್ವರಾಗಿದ್ದು, ಸ್ಥಳೀಯವಾಗಿ ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಕೊಂಕಣಿಯ ಪ್ರಮುಖ ಸಾಂಸ್ಕøತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ಉಪಾಧ್ಯಕ್ಷರಾಗಿದ್ದಾರೆ.

ಬೊಂದೇಲ್ ಚರ್ಚಿನ ಮುಖಂಡರಲ್ಲೋರ್ವರು. ನಾಟಕ ರಂಗದಲ್ಲಿ ಕೂಡಾ ಪರಿಚಿತರು. ಹಲವು ಕೊಂಕಣಿ ಮತ್ತು ತುಳು ಸಿನಿಮಾಗಳಲ್ಲಿ ಕೂಡಾ ನಟನೆ ಮಾಡಿದ್ದಾರೆ. ವಿವಿಧ ಸಂಘಟನೆಗಳ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626